ನಿನ್ನ ಒಡಲ ಬಸಿರಾಗಿ ಮತ್ತೆ ಹೊರ ಬರಲು ತವಕಿಸುತ್ತೇನೆ…..!

23 02 2009

ನನ್ನೊಳಗಿನ ನಾನು ಕಳೆದು ಹೋಗುತ್ತಿರುವುದು ಪ್ರಾಯಶಃ ನಿನ್ನ ಮೌನದಿಂದಲೇ ಇರಬೇಕು. ಅವತ್ತು ಇದ್ದಕ್ಕಿದ್ದಂತೆ ಎದ್ದು ಹೋದೆಯಲ್ಲ; ಹೋದದ್ದಾದರೂ ಎಲ್ಲಿಗೆ..? ನಲ್ಲನನ್ನು ಒಲ್ಲೆ ಅನ್ನದೇ ಮೌನದಾ ಹಾದಿ ತುಳಿದು ಮನೆಯವರು ಒಪ್ಪಿದ್ದ ಅಚ್ಚುಕಟ್ಟಾದ ಆತನ ಬದುಕಿನೊಳಕ್ಕೆ ಕಾಲಿಟ್ಟೆಯಂತೆಲ್ಲ..?  ನನ್ನಲ್ಲೇ ಬಿಟ್ಟು ಹೋಗಿರುವ ನಿನ್ನ ಕಣ್ಣ ಕಂಬನಿ, ದ್ವಂದ್ವ ಸ್ಥಿತಿ, ಅಪಕ್ವ ನಿಧಾ೯ರ, ನಿನ್ನ ಅಸಹಾಯಕತೆಯನ್ನ ಅದೆಲ್ಲಿ ಹೂತಿಡಲಿ…?
ನನ್ನ ಖಿನ್ನತೆ ಇರುವುದು, ನೀ ಹೋದುದಕ್ಕಲ್ಲ, ಹೋಗುವ ಆ ಅರೆ ಘಳಿಗೆಯಲ್ಲಿ ಅಷ್ಟೊಂದು ದುಗುಡದ ದುಃಖವನ್ನ ಅದ್ಯಾವ ಮುಟುಗೆಯಲ್ಲಿ ಹಿಡಿದಿಟ್ಟು ಕೊಂಡು,ನಿನ್ನ ಎದೆಯೊಳಗಿನ ಆರ್ತನಾದದ ಆಕ್ರಂದನಕ್ಕೆ ಸಾಂತ್ವಾನದ ಹಾಲುಣಿಸಿದ ಬಗೆ ಯಾದರೂ ಹೇಗೆ…? ಎಂಬುದರ ಬಗ್ಗೆ.imagesca0me7rq3
ತಪ್ಪು ನಿನ್ನ ಮನಸ್ಥಿತಿಯದಾ..ಪರಿಸ್ಥಿಯದಾ..? ಅದು ನನಗೆ ಬೇಡವಾಗಿದೆ. ಮೊದಲು ಅಲ್ಲಿ ನೀ ಹೇಗಿದ್ದೀಯ ಹೇಳಿಬಿಡು, ನಿನ್ನ ಬದುಕಿನ ಚೌಕಟ್ಟಿನಲ್ಲಿ ನೀನು ಚಂದಗಿದ್ದರೆ ಸಾಕು ಜೀವವೇ…! “ಬಿಟ್ಟು ಬಂದ ನನ್ನ ನಲ್ಲನ ನಿಟ್ಟುಸಿರು….ನನ್ನನ್ನ ಸುಮ್ಮನೇ ಬಿಟ್ಟೀತೇ..” ಎಂಬ ದಿಗಿಲು ಖಂಡಿತಾ ನಿನಗೆ ಬೇಡ. ಅಷ್ಟೊಂದು ಪ್ರೀತಿಸುತ್ತಿದ್ದ ನನ್ನವ್ವ ಕೂಡ ಒಮ್ಮೆ ಇದ್ದಕ್ಕಿದ್ದಂತೆ ಏನನ್ನೂ ಹೇಳದೇ ಜಗತ್ತೇ ಬಿಟ್ಟು ಹೋದಳು; ನನ್ನನ್ನು ತಬ್ಬಲಿಮಾಡಿ. ಅವತ್ತಿನ ಯಾತನೆಗೂ ಇವತ್ತಿನದಕ್ಕೂ ಯಾವುದೇ ವ್ಯತ್ಯಾಸ ನನಗೆ ಕಾಣುತ್ತಿಲ್ಲವಾದ್ದರಿಂದ, ನೀನು ಆತಂಕ ಪಟ್ಟರೆ ಅದಕ್ಕೆ ಅರ್ಥ ಇರುವುದಿಲ್ಲ.
ಬದುಕಿನ ಮೌಲ್ಯಗಳನ್ನರಿತ ಮತ್ತು ಮತ್ತೊಬ್ಬರಿಗೆ ಜೀವನೋತ್ಸಾಹ ತುಂಬುವ ಜೀವಿಯಾದ ನಿನಗೆ ಮೋಸಗೊತ್ತಿಲ್ಲವೆಂದು ನನಗೆ ಗೊತ್ತಿದೆ. ನಿನ್ನ ತುಂಬು ಕುಟುಂಬದ ಒಕ್ಕೊರಿಲಿನ ಒಪ್ಪಂದಕ್ಕೆ ಮಣಿದು ಅವರ ಮನಸ್ಸನ್ನ ಘಾಸಿಗೊಳಿಸಲು ಇಚ್ಛಿಸದೇ ನೀ ಈ ಮದುವೆಗೆ ಒಪ್ಪಿರುವೆ ಎಂಬ ಅಭಿಪ್ರಾಯ ನನ್ನದಾಗಿದೆ. ಬಿಡು ಯಾತನೆ ಎಂಬುದು ಯಾರನ್ನು ಬಿಟ್ಟಿದೆ..? ಒಂದಿಲ್ಲ ಒಂದು ಪಾತ್ರದಲ್ಲಿ ಅದು ಪ್ರತಿಯೊಬ್ಬರನ್ನೂ ಕಾಡುತ್ತಲೇ ಇರುತ್ತದೆ. ಆದರೆ ನನ್ನ ಪಾಲಿಗೆ ಇದು ಕಾಡುವ ಪರಿ ಇದೆಯಲ್ಲಾ…? ನಿಜಕ್ಕೂ ನನ್ನ ಶತೃವಿಗೂ ಬೇಡ. ಅವ್ವ ನನ್ನ ಬಿಟ್ಟು ಹೋದಾಗಿನಿಂದ ಅಪ್ಪ ದೂರದೂರಿನಲ್ಲಿರುವ ಅಣ್ಣನ ಮನೆಗೆ ಹೋಗಿಬಿಟ್ಟ. ಅಕ್ಕಂದಿರು ಗಂಡನ ಮನೆಯಲ್ಲಿ ತಣ್ಣಗಿದ್ದಾರೆ. ನಿನಗಾಗಿ ಜಾತಿ, ಸಮಾಜವನ್ನೇ ಮೊದಲೇ ಧಿಕ್ಕರಿಸಿದ್ದೆ. ನನ್ನ ಪಾಲಿಗೆ ಉಳಿದಿದ್ದು ಅವ್ವಳ ನೆನಪು ಮತ್ತುನೀನು ಮಾತ್ರ. ಈಗ ನೀನೂ ಆಟ ಮುಗಿಯಿತೆಂಬತೆ ಹೊರಟು ಹೋಗಿಬಿಟ್ಟೆ. ಹುಬ್ಬೆಗರಿಸಿ ಪ್ರೆಶ್ನೆ ಕೇಳುವ ಸಮಾಜಕ್ಕೆ; ನನ್ನಲ್ಲಿ ಉತ್ತರ ಇದೆಯಾದರೂ..ಎಲ್ಲಿ? ಮನೆಯ ಕೋಣೆಯ ಹೊಕ್ಕು ತೀರ ಕುಬ್ಜನಾಗಿದ್ದೇನೆ. ಹಾಗೆಯೇ ಬಿಕ್ಕಳಿಸುತ್ತಾ ಗೋಡೆಗೊರಗಿ ಕುಳಿತು ಅವ್ವಳ ಭಾವ ಚಿತ್ರ ನೋಡುತ್ತಿದ್ದೇನೆ, ಯಾರೂ ಇಲ್ಲದ ಅನಾಥನಾಗಿ. ತುಂಬಾ ಅಳು ಬರುತ್ತಿದೆ..ಅತ್ತು ಹಗುರಾಗಲು ಯಾರ ಹೆಗಲೂ ಆಸರೆಇಲ್ಲ ಅಂದಮೇಲೆ ನಾನು ಅವ್ವಳ ಮತ್ತು ನಿನ್ನ ನೆನಪುಗಳೊಡನೆ ಈ ಜಗತ್ತಿನ ಪಾಲಿಗೆ ಇನ್ನಿಲ್ಲವಾಗಬಯಸುತ್ತೇನೆ ಮತ್ತು ನಿನ್ನ ಒಡಲ ಬಸಿರಾಗಿ ಮತ್ತೆ ಹೊರಬರಲು ತವಕಿಸುತ್ತೇನೆ…!
                                          ಇಂತಿ,
                                               -ನಾಗು,ತಳವಾರ್.


Actions

Information

7 responses

1 03 2009
svatimuttu

ಪ್ರೀತಿಯ ಅಣ್ಣ,

ನಿಮ್ಮ ಈ ಪತ್ರ ಓದಿ ಕಣುಗಳಲ್ಲಿ ನೀರಾಡಿದವು….. ಅಣ್ಣ.. ಅಮ್ಮ ನಲ್ಲೆ ಇಲ್ಲದಿದ್ದರೇನಂತೆ ಈ ನಿಮ್ಮತಂಗಿ ಇದ್ದಾಳೆ ..
ಅಲ್ಲ್ವೆ……………….?????

8 03 2009
nagtalwar

ತಂಗೀ ನಿನ್ನ ಮಾತು ಹೃದಯಕ್ಕ ತಗಂಡೀನವ್ವ…!

7 03 2009
ranjith

ಏನ್ಸಾರ್? ಇಷ್ಟು ಭಾವುಕತೆಯಿಂದ ಬರ್ದಿದ್ದೀರಿ??:)

8 03 2009
nagtalwar

ಸುಮ್ನೆ ಬರ್‍ದೆ ಸಾರ್, ಯಾಕೋ ಆಕೆ ನೆನಪಾಗಿದ್ಲು..!

17 03 2009
santhosh bagilagadde

thumba chennagi bardidiri. intha yathanegale badukige artha kalpisuthave. yare mosa madidru aksharagalu mosa madodilla.

17 03 2009
Pradeep

ಸರ್, ನಾನು ಒಂದು ಮಾತನ್ನು ಹೇಳುತ್ತೇನೆ. ನೀವು ನಿಮ್ಮ ಸ್ನೇಹಿತರಲ್ಲಿ ನಿಮ್ಮ ಭಾವನೆಗಳನ್ನು ಹೇಳಿಕೊಳ್ಳಿ, ಮನಸನ್ನು ಹಗುರ ಮಾಡಿಕೊಳ್ಳಿ, ಮನಸ್ಸು ಹಗುರವಗೋ ವರೆಗೂ ನಿಮ್ಮ ಕಣ್ಣಿನಿಂದ ನೀರು ಸದಾ ಹರಿಯುತ್ತ ಇರುತ್ತದೆ. ನೀವು ನನ್ನ ಮೇಲ್ ಗೆ ಮೆಸೇಜ್ ಮಾಡಿದರೆ ನನ್ನ ಮೊಬೈಲ್ ನಂಬರ್ ಅನ್ನು ನಿಮಗೆ ರಿಪ್ಲೈ ಮಾಡ್ತೇನೆ.

ಪ್ರದೀಪ್.

21 03 2009
minchulli

sogasaagide bhaavadorathe

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s
%d bloggers like this: